08354-230279 /280 registrar@uhsbagalkot.edu.in

Recruitment Tenders Web Mail ಕನ್ನಡ

UHS, BAGALKOT BAGS 20th RANK AMONG AGRICULTURAL UNIVERSITIES.

ವಿಶ್ವವಿದ್ಯಾಲಯದ ಡೀನ್ ವಿದ್ಯಾರ್ಥಿ ಕಲ್ಯಾಣ ಕಚೇರಿಯಲ್ಲಿ ರ‍್ಯಾಗಿಂಗ್ ನಿಗ್ರಹ ಕೋಶವನ್ನು ಸ್ಥಾಪಿಸಲಾಗಿದೆ, ಇದರ ಅಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ಪ್ರಕರಣ ತಡೆಗಟ್ಟಲು ತೋ.ವಿ.ವಿ ಅಧೀನದಲ್ಲಿ ಬರುವಂತಹ ಎಲ್ಲ ತೋಟಗಾರಿಕೆ ಮಹಾವಿದ್ಯಾಲಯಗಳಲ್ಲಿ ರ್ಯಾಗಿಂಗ್ ನಿಗ್ರಹ ಸಮಿತಿ ರಚಿಸಲಾಗಿದೆ.

ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ನಿಗ್ರಹ ಸಮಿತಿಯಲ್ಲಿ ಮಹಾವಿದ್ಯಾಲಯದ ಡೀನ್, ಹಿರಿಯ ಪ್ರಾಧ್ಯಾಪಕರು, ಸಹ ಹಾಗೂ ಸಹಾಯಕ ಪ್ರಾಧ್ಯಾಪಕರು, ವಸತಿ ನಿಲಯಗಳ ವಾರ್ಡನ್ಗಳು, ಹಿರಿಯ ಶಿಕ್ಷಕೇತರ ಸಿಬ್ಬಂದಿ, ಪ್ರತಿಷ್ಠಿತ ಸಾಮಾಜಿಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಪರವಾಗಿ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿಯನ್ನು ಒಳಗೊಂಡಿರುತ್ತದೆ.

 

ಸಮಿತಿಯು ತನ್ನದೇ ಆದ ವಿಶೇಷ ವೇಳಾಪಟ್ಟಿಯನ್ನು ಹೊಂದಿದೆ ವಿಶ್ವವಿದ್ಯಾಲಯದ ಆವರಣದ ಸೂಕ್ಷ್ಮ ಪ್ರದೇಶಗಳು ಸಿಸಿಟಿವಿ ಅಳವಡಿಸದೇ ಇರುವ ಪ್ರದೇಶಗಳು ಹಾಗೂ ವಸತಿನಿಲಯಗಳು, ಉಪಹಾರ ಗೃಹ, ಹೊರಾಂಗಣ, ಬೋಧನಾ ಕೊಠಡಿಗಳು, ಪ್ರಯೋಗಾಲಯಗಳು, ಕ್ಷೇತ್ರ ತಾಕುಗಳು ಹಾಗೂ ಆಟದ ಮೈದಾನದಲ್ಲಿ ರ್ಯಾಗಿಂಗ್ ಸಮಿತಿಯವರು ಅನೀರಿಕ್ಷಿತ ಭೇಟಿ ನೀಡಿ ಶಿಸ್ತನ್ನು ನಿರ್ವಹಿಸಲು ಕ್ರಮ ಕೈಗೊಳ್ಳುತ್ತಾರೆ.

ಸಮಿತಿಯು ಮಹಾವಿದ್ಯಾಲಯದ ಕಾರ್ಯನಿರ್ವಹಣೆಯ ಸಮಯ, ಸಂದಿಗ್ಧ ಸಮಯಗಳಲ್ಲಿ ಅಂದರೆ ವರ್ಗಗಳು ಮುಗಿದ ನಂತರ, ಪ್ರಯೋಗಾಲಯದ ಅವಧಿ ಹಾಗೂ ಕಚೇರಿ ಅವಧಿಯ ನಂತರದ ಸಮಯದಲ್ಲಿ ಆಟದ ಮೈದಾನ ಹಾಗೂ ವಸತಿ ನಿಲಯಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಮುನ್ಸೂಚನೆ ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ.

          ರಜೆಯ ದಿನಗಳು ಹಾಗೂ ತಡರಾತ್ರಿ ವೇಳೆಗಳಲ್ಲಿ ವಸತಿನಿಲಯಗಳಲ್ಲಿ ಅತಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಕೈಗೊಳ್ಳಲಾಗಿದೆ. ಹೀಗೆ ಸಮಿತಿ ವತಿಯಿಂದ ಪರಿವಿಕ್ಷಣೆ ನಡೆಸಿದಾಗ ಯಾವುದೇ ರ್ಯಾಗಿಂಗ್ ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿರುವದಿಲ್ಲವೆಂದು ತಿಳಿಸಲು ಹೆಮ್ಮೆಯೆನಿಸುತ್ತದೆ. ಎಲ್ಲ ವಿದ್ಯಾರ್ಥಿಗಳು ತಾವೇ ಸ್ವತಃ ಅಂತರ್ಜಾಲದಲ್ಲಿ ಅಮನ್ ಮೂವಮೆಂಟ್(ಚಳುವಳಿ) ಹಾಗೂ http://www.antiragging.in ಜಾಲತಾಣಗಳಲ್ಲಿ ತಾವು ಯಾವುದೇ ತರಹದ ರ‍್ಯಾಗಿಂಗ್ ನಲ್ಲಿ ಭಾಗವಹಿಸುವದಿಲ್ಲ ಅಥವಾ ಯಾವುದೇ ತರಹದ ರ್ಯಾಗಿಂಗ್ ಚಟುವಟಿಕೆಗಳಲ್ಲಿ ಭಾಗವಹಿಸುವದಿಲ್ಲ ಎಂದು ಪ್ರಮಾಣೀಕರಿಸುವದು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಪಾಲಕರಿಂದ ಹಾಗೂ ಪೋಷಕರಿಂದ ಹಿಂಬರಹವನ್ನು ಕೂಡಾ ಪಡೆಯಲಾಗಿದೆ. ನಿರಂತರವಾಗಿ ರ್ಯಾಗಿಂಗ್ ತಡೆಗಟ್ಟುವ ಹಾಗೂ ಅವುಗಳ ದುಷ್ಪರಿಣಾಮವನ್ನು ತಿಳಿಸುವ ವಿಡಿಯೊಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಜಾಗೃತಿ ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರಲು ಎಚ್ಚರಿಸಿ, ಒಂದು ವೇಳೆ ರ‍್ಯಾಗಿಂಗ್ ಚಟುವಟಿಕೆಗಳಲ್ಲಿ ಭಾಗವಹಿಸುವದು ಕಂಡುಬಂದರೆ ಅದಕ್ಕೆ ತಕ್ಕ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಯಪಡಿಸಲಾಗಿದೆ.

          ರಾಷ್ಟ್ರೀಯ ಸಂಸ್ಥೆಗಳಾದ ಮಾನವ ಸಂಪನ್ಮೂಲ ಅಭಿವೃದ್ಧಿ ಆಯೋಗ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಭಾರತ ಸರ್ಕಾರ ಇವರ ಕಚೇರಿಗಳಿಗೆ ರ‍್ಯಾಗಿಂಗ್ ಕುರಿತ ನಿಯಮಿತ ಮಾಹಿತಿಯನ್ನು ವಿಶ್ವವಿದ್ಯಾಲಯದ ವತಿಯಿಂದ ಕಳುಹಿಸಲಾಗಿದೆ.

 

Ragging Related Circulars (by UGC)

 

24 X 7 ANTI RAGGING HELPLINE

National Anti Ragging Help Line (UGC Crisis Hotline)
24x7 Toll Free Number* 1800-180-5522 
(This email address is being protected from spambots. You need JavaScript enabled to view it.)

http://www.antiragging.in

and 

www.amanmovement.org